ಕೋನಿಡೇಲಾ ಕಲ್ಯಾಣ್ ಬಾಬು (ಜನನ 2 ಸೆಪ್ಟೆಂಬರ್ 1971), ಅವರ ವೇದಿಕೆಯ ಹೆಸರು ಪವನ್ ಕಲ್ಯಾಣ್, ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಬರಹಗಾರ ಮತ್ತು ರಾಜಕಾರಣಿ.ಅವರ ತೆಲುಗು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ . == ನಟನೆ == ಕಲ್ಯಾಣ್ ಅವರು 1996 ರ ತೆಲುಗು ಚಿತ್ರ ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಚಿತ್ರದಿಂದ ತಮ್ಮ ನಟನೆಯನ್ನು ಪ್ರಾರಂಭಿಸಿದರು.1998 ರಲ್ಲಿ ಅವರು ತೊಲಿ ಪ್ರೇಮ ಚಿತ್ರದಲ್ಲಿ ಅಭಿನಯಿಸಿದರು ಮತ್ತು ಆ ವರ್ಷದ ತೆಲುಗು ಚಲನಚಿತ್ರದಲ್ಲಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.ಅವರು ಗೋಕುಲಂಲೋ ಸೀತಾ, ಸುಸ್ವಾಗತಮ್, ತಮ್ಮುಡು, ಬದ್ರಿ, ಖುಶಿ, ಜಲ್ಸಾ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್, ಕ್ಯಾಮೆರಾಮೆನ್ ಗಂಗತೋ ರಾಂಬಾಬು ಇತ್ಯಾದಿ ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ.ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದಿದ್ದರು. ಅವರು ಅಂಜನಾ ಪ್ರೊಡಕ್ಷನ್ಸ್ ಮತ್ತು ಪವನ್ ಕಲ್ಯಾಣ್ ಕ್ರಿಯೇಟಿವ್ ವರ್ಕ್ಸ್ ಎಂಬ ಬ್ಯಾನರ್ಗಳ ಅಡಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. == ರಾಜಕೀಯ ವೃತ್ತಿ == ಪವನ್ ಕಲ್ಯಾಣ್ ಮಾರ್ಚ್ 14, 2014 ರಂದು ಜನ ಸೇನಾ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. == ಆಯ್ದ ಚಲನಚಿತ್ರಗಳ ಪಟ್ಟಿ == 1998: ತೊಲಿ ಪ್ರೇಮ 1999: ತಮ್ಮುಡು 2000: ಭದ್ರಿ 2001: ಖುಶಿ 2008: ಜಲ್ಸಾ 2012: ಗಬ್ಬರ್ ಸಿಂಗ್ 2013: ಅತ್ತಾರಿಂಟಿಕಿ ದಾರೇದಿ 2016: ಸರ್ದಾರ್ ಗಬ್ಬರ್ ಸಿಂಗ್ 2017: ಕಾಟಮರಾಯುಡು == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪವನ್ ಕಲ್ಯಾಣ್ ಐ ಎಮ್ ಡಿ ಬಿನಲ್ಲಿ